About: http://data.cimple.eu/claim-review/8b4506e36a79bf8893219ba2dad6b62cccc7a3a239302f66e87ae850     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಲಕ್ನೋದಲ್ಲಿ ಶಾಲೆಯಲ್ಲಿ ನಡೆದ ನಾಟಕವನ್ನು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೆ ಲಕ್ನೋದಲ್ಲಿ ಶಾಲೆಯಲ್ಲಿ ನಡೆದ ನಾಟಕವನ್ನು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೆ Claim :ದೆಹಲಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು 'ಭಾರತ ಮಾತಾ' ಕಿರೀಟವನ್ನು ತೆಗೆದು ನಮಾಜ್ ಮಾಡಿದರು Fact :ಉತ್ತರ ಪ್ರದೇಶದ ಲಕ್ನೋದ ಶಾಲೆಯಲ್ಲಿ ನಡೆದ ನಾಟಕವನ್ನು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೆ ಇತ್ತೀಚಿಗೆ ಸಾಮಾಜಿಕ ಮಾದ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ವಿಡಿಯೋವಿನಲ್ಲಿ ಭಾರತ ಮಾತೆಯ ಉಡುಪು ಮತ್ತು ಕಿರೀಟವನ್ನು ಧರಿಸಿರುವುದು ಕಾಣಬಹುದು. ಆಕೆಯನ್ನು ಸುತ್ತುವರೆದಿರುವ ಹುಡುಗರು ಮತ್ತು ಹುಡುಗಿಯರು ಮುಸ್ಲೀಮರು ಧರಿಸುವ ತಲೆಬುರುಡೆಯ ಕ್ಯಾಪ್ ಮತ್ತು ಹಿಜಾಬ್ಗಳನ್ನು ಧರಿಸಿರುವುದನ್ನು ನಾವೀ ವೀಡಿಯೊದಲ್ಲಿ ನೋಡಬಹುದು. ವೀಡಿಯೊ ಮುಂದುವರೆದಂತೆ, ತಲೆಬುರುಡೆಯ ಟೋಪಿಗಳನ್ನು ಧರಿಸಿರುವ ವಿದ್ಯಾರ್ಥಿಗಳು "ಭಾರತ್ ಮಾತಾ" ವೇಷಭೂಷಣದಲ್ಲಿರುವ ವಿದ್ಯಾರ್ಥಿನಿಯ ತಲೆಯಿಂದ ಕಿರೀಟವನ್ನು ತೆಗೆದು ಅವರು ಅವಳ ತಲೆಯ ಮೇಲೆ ಸ್ಕಾರ್ಫ್ ಹಾಕಿ ನಮಾಜ್ ಮಾಡವು ಹಾಕೆ ಆಕೆಯನ್ನು ಕೂರಿಸಿ ಅವರೂ ಸಹ ನಮಾಜ್ ಮಾಡಲು ಪ್ರಾರಂಭಿಸುತ್ತಾರೆ. ಈ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಬಳಕೆದಾರರು ಕೋಮುವಾದಿ ಹೇಳಿಕೆಯೊಂದಿಗೆ ಈ ವಿಡಿಯೋ ದೆಹಲಿ ಶಾಲೆಯದು ಎಂದು ಹಂಚಿಕೊಳ್ಳುತ್ತಿದ್ದಾರೆ. ಜನವರಿ 08, 2025ರಂದು ಪ್ರೇಮ್ಚಂದ್ ಎಂಬ ಎಕ್ಸ್ ಖಾತೆರಾರರೊಬ್ಬರು ವಿಡಿಯೋವನ್ನು ಹಂಚಿಕೊಂಡು ʼअगर ये देखकर भी बस की फ्री टिकट चाहिए तो तुम भी कलमा पढ़ लो 👆दिल्ली के सरकारी स्कूलों में ये हो रहा है !! भारत माता के सिर से मुकुट उतारकर सफेद कपड़ा रखकर कलमा पढ़ाया जा रहा है। ये स्कूल आतिशी के एरिया में है , ये है दिल्ली के स्कूलों का केजरीवाल मॉडल,ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇದನ್ನು ನೋಡಿದ ಮೇಲೂ ನಿಮಗೆ ಉಚಿತ ಬಸ್ ಟಿಕೆಟ್ ಬೇಕಿದ್ದರೆ ನೀವೂ ಕಲ್ಮವನ್ನು ಪಠಿಸಬೇಕು. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಹೀಗಾಗುತ್ತಿದೆ. ಭಾರತ ಮಾತೆಯ ತಲೆಯ ಮೇಲಿನ ಕಿರೀಟವನ್ನು ತೆಗೆದು ಬಿಳಿ ಬಟ್ಟೆಯನ್ನು ಇಟ್ಟು ಕಲ್ಮ ಕಲಿಸಲಾಗುತ್ತಿದೆ. ಈ ಶಾಲೆಯು ಅತಿಶಿ ಎಂಬ ಪ್ರದೇಶದಲ್ಲಿದೆ, ಇದು ದೆಹಲಿಯಲ್ಲಿರುವ ಕೇಜ್ರಿವಾಲ್ ಶಾಲೆಗಳ ಮಾದರಿʼ ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. ಜನವರಿ 16, 2025ರಂದು ʼಶಾರ್ಟ್ ಫೀಡ್ ವೈವೈಟಿʼ ಎಂಬ ಯೂಟ್ಯೂಬ್ ಖಾತೆದಾರರರೊಬ್ಬರು ವಿಡಿಯೋವನ್ನು ಹಂಚಿಕೊಂಡು ʼMuslim kast k baccha ko bhart mata se dikkat haiʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜನವರಿ 11, 2025ರಂದು ʼಶ್ಯಾಮ್ ಸುಂದರ್ ಶರ್ಮʼ ಎಂಬ ಫೇಸ್ಬುಕ್ ಖಾತೆದಾರ ʼदिल्ली के सरकारी स्कूलों में ये हो रहा है !! भारत माता के सिर से मुकुट उतारकर सफेद कपड़ा रखकर कलमा पढ़ाया जा रहा है। ये है दिल्ली के स्कूलों का केजरीवाल मॉडल, ग्रुपमध्ये पाठवा. जन जागृती आवश्यकʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇದು ದೆಹಲಿ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದೆ!! ಭಾರತ ಮಾತೆಯ ತಲೆಯಿಂದ ಕಿರೀಟವನ್ನು ತೆಗೆದು ಬಿಳಿ ಬಟ್ಟೆಯನ್ನು ಹಾಕುವ ಮೂಲಕ ಕಲ್ಮಾವನ್ನು ಕಲಿಸಲಾಗುತ್ತಿದೆ. ಇದು ದೆಹಲಿ ಶಾಲೆಗಳ ಕೇಜ್ರಿವಾಲ್ ಮಾದರಿ” ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಉತ್ತರ ಪ್ರದೇಶದ ಲಕ್ನೋದ ಶಾಲೆಯಲ್ಲಿ ನಡೆದ ನಾಟಕವದು. ಈ ನಾಟಕದಲ್ಲಿ ವಿದ್ಯಾರ್ಥಿಗಳು ಎಲ್ಲಾ ಧರ್ಮಗಳಿಗೆ ಗೌರವ ಮತ್ತು ಕೋಮು ಸೌಹಾರ್ದತೆಯನ್ನು ಹೆಚ್ಚಿಸುವ ಸಂದೇಶವನ್ನು ಇಲ್ಲಿ ನೀಡಿದ್ದಾರೆ. ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋದಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ ಆಗಸ್ಟ್ 15, 2022ರದ್ದು ಎಂದು ತಿಳಿಯಿತು. ಹಲವಾರು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ವಿಡಿಯೋವನ್ನು ಆಗಲೂ ಕೆಲವು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವೈರಲ್ ಆದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ಕೇವಲ ಮೂವತ್ತು ಸೆಕೆಂಡ್ಗಳ ಕ್ಲಿಪ್ನ್ನು ಮಾತ್ರವೇ ಹಂಚಿಕೊಂಡಿದ್ದಾರೆ. ಆಗಸ್ಟ್ 15, 2022ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತ ʼಅರವಿಂದ್ ಚೌಹಾಣ್ʼ ಈ ನಾಟಕವನ್ನು ಮತ್ತೋಂದು ಕೋನದಲ್ಲಿ ರೆಕಾರ್ಡ್ ಮಾಡಲಾದ ಎರಡು ನಿಮಿಷದ ಇಪತ್ತು ಸೆಕೆಂಡ್ಗಳನ್ನು ಒಳಗೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವಿನ ದೀರ್ಘ ಆವೃತ್ತಿಯಲ್ಲಿ ವಿದ್ಯಾರ್ಥಿಗಳು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಪ್ರಾರ್ಥನೆ ಸಲ್ಲಿಸುವುದನ್ನು ನೋಡಬಹುದು. ಹಾಗೆ ವಿವಿಧ ಧಾರ್ಮಿಕ ಗುಂಪುಗಳನ್ನು ಸೂಚಿಸುವ ವಿವಿಧ ಗುಂಪುಗಳ ವಿದ್ಯಾರ್ಥಿಗಳು ಭಾರತ ಮಾತಾ ವೇಷಧಾರಣೆಯಲ್ಲಿರುವ ವಿದ್ಯಾರ್ಥಿನಿಯ ಜೊತೆಗೆ ಹೇಗೆ ನಾಟಕದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿದೆ. ಮತ್ತಷ್ಟು ಹುಡುಕಾಟದಲ್ಲಿ ನಮಗೆ ಆಗಸ್ಟ್ 15, 2022ರಂದು ʼಡಾ. ಟೀನಾ ಶರ್ಮʼ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು भारत माँ के सिर का मुकुट हटाकर पहना दिया हिजाब। मंच से अदा कराया नमाज! वीडियो "शिशु भारतीय विद्यालय" मालवीय नगर ऐशबाग लखनऊ का है । राष्ट्रीय पर्व पर जिहाद और अलगाववाद के इस एजेंडे से आपको क्या समझ आया ? ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಡಾ. ಟೀನಾ ಶರ್ಮ್ ಮಾಡಿರುವ ಎಕ್ಸ್ ಪೊಸ್ಟ್ಗೆ ʼಲಕ್ನೋ ಪೊಲೀಸರು ರೀ ಟ್ವಿಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಆಗಸ್ಟ್ 15, 2022ರಂದು ʼಲಕ್ನೋ ಪೊಲೀಸ್ʼ ಎಂಬ ಎಕ್ಸ್ ಖಾತೆಯಲ್ಲಿ ʼछोटे बच्चों द्वारा सांप्रदायिक सौहार्द हेतु प्रस्तुत नाटिका का सम्पूर्ण वीडियो,जिसको कुछ असामाजिक तत्वों द्वारा गलत ढंग से प्रचारित कर सांप्रदायिक द्वेष फैलाने का अपराधिक कृत्य किया गया है। ऐसे लोगों के विरुद्ध सख्त कानूनी कार्रवाई की जाएगी।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವಿನ ಪೂರ್ತಿ ಆವೃತ್ತಿಯನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼʼಇಡೀ ವಿಡಿಯೋ ಕೋಮು ಸೌಹಾರ್ದತೆಯನ್ನು ಪ್ರಸ್ತುತಪಡಿಸುವ ಚಿಕ್ಕ ಮಕ್ಕಳ ಶಾಲಾ ನಾಟಕದ್ದಾಗಿದೆ. ಆದಾಗ್ಯೂ, ಕೆಲವು ಸಮಾಜ ವಿರೋಧಿ ಶಕ್ತಿಗಳು ಈ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಹರಡುತ್ತಿವೆ, ಅಂತಹ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಪೋಸ್ಟ್ ಮಾಡಿದ್ದಾರೆ. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಉತ್ತರ ಪ್ರದೇಶದ ಲಕ್ನೋದ ಶಾಲೆಯಲ್ಲಿ ನಡೆದ ನಾಟಕವದು. ಈ ನಾಟಕದಲ್ಲಿ ವಿದ್ಯಾರ್ಥಿಗಳು ಎಲ್ಲಾ ಧರ್ಮಗಳಿಗೆ ಗೌರವ ಮತ್ತು ಕೋಮು ಸೌಹಾರ್ದತೆಯನ್ನು ಹೆಚ್ಚಿಸುವ ಸಂದೇಶವನ್ನು ಇಲ್ಲಿ ನೀಡಿದ್ದಾರೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software