About: http://data.cimple.eu/claim-review/9fba3b179b8118ead76c1a7201fde3bdc066b570659f5652721516a2     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ ಚೆಕ್: ಇಲ್ಲ, ಗೃಹಲಕ್ಷ್ಮಿ ಹಣದ ಜೊತೆ ಹೆಚ್ಚುವರಿಯಾಗಿ 5,000 ರೂ ನೀಡುವುದಾಗಿ ಡಿಕೆ ಶಿವಕುಮಾರ್ ಘೋಷಿಸಿಲ್ಲ ಕರ್ನಾಟಕದ ಸಿಎಂ ಡಿಕೆ ಶಿವಕುಮಾರ್ ಅವರು ಜೂನ್ 2026 ಕ್ಕೆ ಹೆಚ್ಚುವರಿ 5,೦೦೦ ರೂ ಗೃಹಲಕ್ಷ್ಮಿ ಪಾವತಿಯನ್ನು ಘೋಷಿಸಿದ್ದಾರೆ ಎಂಬ ವೈರಲ್ ಹೇಳಿಕೆ ತಪ್ಪು. Claim : ಜೂನ್ 2026 ರ ಗೃಹಲಕ್ಷ್ಮಿ ಪಾವತಿಯೊಂದಿಗೆ ಹೆಚ್ಚುವರಿಯಾಗಿ 5,000 ರೂ ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.Fact : 5,000 ರೂ ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಅಥವಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಅಥವಾ ಆದೇಶಗಳನ್ನು ಹೊರಡಿಸಲಾಗಿಲ್ಲ.ಸಿದ್ದರಾಮಯ್ಯ ಅವರು ಮೇ 28, 2026 ರಂದು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅವರ ನಂತರ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡರು. ಅವರು ಜೂನ್ 3, 2026 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಮಧ್ಯ, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಖುಷಿಗೆ ಜೂನ್ಗೆ ಗೃಹಲಕ್ಷ್ಮಿ ಪಾವತಿಗೆ ಹೆಚ್ಚುವರಿಯಾಗಿ 5,000 ರೂಗಳನ್ನು ಘೋಷಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಹೇಳಿಕೊಂಡಿದೆ. ಪೋಸ್ಟ್ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್ ಚೆಕ್: ವೈರಲ್ ಹೇಳಿಕೆ ತಪ್ಪು. ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಆಗಲಿ ಅಥವಾ ಯಾವುದೇ ಅಧಿಕೃತ ಇಲಾಖೆಯಾಗಲಿ ಜೂನ್ ತಿಂಗಳಿಗೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ 5,000 ರೂ ನೀಡುವುದಾಗಿ ಘೋಷಿಸಿಲ್ಲ. ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಕಾಂಗ್ರೆಸ್ ಸರ್ಕಾರವು 2023 ರಲ್ಲಿ ಘೋಷಿಸಿದ ಖಾತರಿ ಯೋಜನೆಯಾಗಿದೆ. ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸಲು, ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಇದು ಕುಟುಂಬದ ಮಹಿಳೆಯ ಖಾತೆಗೆ ತಿಂಗಳಿಗೆ 2000 ರೂ ಹಾಕಲಾಗುತ್ತದೆ. ಈ ಯೋಜನೆಯ ಅರ್ಹ ಫಲಾನುಭವಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸಲಾದ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಮಹಿಳೆಯರು ಮನೆಯ ಮುಖ್ಯಸ್ಥರಾಗಿರಬೇಕು. ನಾವು ಗೂಗಲ್ ಸರ್ಚ್ ಅನ್ನು ಪ್ರಯತ್ನಿಸಿದೆವು ಮತ್ತು ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಿಸಿದ ಹೊಸ ಭರವಸೆಗಳಿಗೆ ಸಂಬಂಧಿಸಿದ ಲೇಖನಗಳನ್ನು ನಾವು ಕಂಡುಕೊಂಡಿವು. ಜೂನ್ 3, 2026 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೊಸ ಭರವಸೆಗಳನ್ನು ಘೋಷಿಸಿದರು. ಕರ್ನಾಟಕದ ಮುಖ್ಯಮಂತ್ರಿಯವರ ವೆಬ್ಸೈಟ್ನ ಜೂನ್ 03, 2026, ಪತ್ರಿಕಾ ಪ್ರಕಟಣೆ ಪ್ರಕಾರ, ಹೊಸ ಭರವಸೆಗಳು - ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 50,000 ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದು, ಯುವಕರಿಗೆ ಖಾಸಗಿ ಉದ್ಯೋಗ ವಿನಿಮಯ ಮತ್ತು ರೈತರಿಗೆ ಸಹಾಯ ಮಾಡುವುದು. ನ್ಯೂಸ್ 18 ಕನ್ನಡ ಕೂಡ ಅದರ ಯೂಟ್ಯೂಬ್ ಚಾನೆಲ್ನಲ್ಲಿ ವರದಿ ಮಾಡಿದೆ. ಅವುಗಳ ಜೊತೆಗೆ, 10,000 ಭಾರತ್ ಜೋಡೋ ಯುವಕರ ಸಂಘವನ್ನು ಸ್ಥಾಪಿಸುವುದು, ಬೆಂಗಳೂರು ರಸ್ತೆಗಳನ್ನು ಸರಿಪಡಿಸುವುದು ಮತ್ತು ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವ ಒಂದು-ಬಾರಿ ಯೋಜನೆಯನ್ನು ಅವರು ಘೋಷಿಸಿದರು ಎಂದು CNBC-TV18 ವರದಿ ಮಾಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಇಂಡಿಯಾ ಟುಡೇ ಕೂಡ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಡಿಕೆ ಶಿವಕುಮಾರ್ ಘೋಷಿಸಿದ ಅದೇ ಭರವಸೆಗಳ ಬಗ್ಗೆ ವರದಿ ಮಾಡಿದೆ. ಕರ್ನಾಟಕದ ಮುಖ್ಯಮಂತ್ರಿಯವರ ವೆಬ್ಸೈಟ್ನ ಜೂನ್ 04, 2026, ಪತ್ರಿಕಾ ಪ್ರಕಟಣೆಯು ಇತರ ಯೋಜನೆಗಳನ್ನು ವರದಿ ಮಾಡಿದೆ - ಗೃಹ ಜ್ಯೋತಿ ಯೋಜನೆಯಡಿ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ, ಸಾರ್ವಜನಿಕ ಸಮಸ್ಯೆಗಳಿಗೆ ಪ್ರತಿಕ್ರಿಯಿಸಲು ಪ್ರತ್ಯೇಕ ಸಚಿವಾಲಯ, ಮತದಾರರ ಪಟ್ಟಿ ಪರಿಷ್ಕರಣೆ, CSR ನಿಧಿಗಳ ಬಳಕೆ ಮತ್ತು NRI ಗಳಿಗೆ ಪ್ರತ್ಯೇಕ ಸಚಿವಾಲಯ. ಆದರೆ ಡಿಕೆ ಶಿವಕುಮಾರ್ ಅವರು ಜೂನ್ ತಿಂಗಳಿಗೆ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಪಾವತಿಯೊಂದಿಗೆ ಹೆಚ್ಚುವರಿ 5,000 ರೂಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂಬ ವೈರಲ್ ಹೇಳಿಕೆಯ ಕುರಿತು ಯಾವುದೇ ಲೇಖನ ಅಥವಾ ವಿಡಿಯೋ ವರದಿಯು ನಮಗೆ ಕಂಡುಬಂದಿಲ್ಲ. ಮುಖ್ಯಮಂತ್ರಿಯವರ ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಯಾವುದೇ ಪತ್ರಿಕಾ ಪ್ರಕಟಣೆ ಗೃಹಲಕ್ಷ್ಮಿ ಫಲಾನುಭವಿಗೆ 5,000 ರೂಗಳನ್ನು ಒದಗಿಸುವ ಕುರಿತು ಪ್ರಕಟಿಸಿಲ್ಲ. ಹಾಗು ಡಿಕೆ ಶಿವಕುಮಾರ್ ಅವರ ಅಧಿಕೃತ ಎಕ್ಸ್, ಫೇಸ್ಬುಕ್ ಖಾತೆಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿಯವರ ಎಕ್ಸ್, ಫೇಸ್ಬುಕ್ ಖಾತೆಯನ್ನು ಸಹ ನಾವು ಹುಡುಕಿದ್ದೇವೆ, ಗೃಹಲಕ್ಷ್ಮಿ ಫಲಾನುಭವಿಗೆ 5,000 ರೂಗಳನ್ನು ಒದಗಿಸುವ ಕುರಿತು ಯಾವುದೇ ಪೋಸ್ಟ್ ಮಾಡಿಲ್ಲ. ಜೂನ್ ತಿಂಗಳಿಗೆ ಗೃಹಲಕ್ಷ್ಮಿ ಫಲಾನುಭವಿಗೆ 5,000 ರೂಗಳನ್ನು ಒದಗಿಸುವ ಯಾವುದೇ ಅಧಿಕೃತ ದಾಖಲೆಗಳು ಜೂನ್ 05, 2026 ರವರೆಗೆ ಪ್ರಕಟಗೊಂಡಿಲ್ಲ ಎಂದು ನಮ್ಮ ಪುರಾವೆಗಳು ದೃಢಪಡಿಸುತ್ತವೆ. ಆದ್ದರಿಂದ, ವೈರಲ್ ಹೇಳಿಕೆ ತಪ್ಪು ಎಂದು ನಾವು ಕಂಡುಕೊಂಡಿದ್ದೇವೆ.
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.123 as of May 22 2025


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data]
OpenLink Virtuoso version 07.20.3241 as of May 22 2025, on Linux (x86_64-pc-linux-musl), Single-Server Edition (126 GB total memory, 21 GB memory in use)
Data on this page belongs to its respective rights holders.
Virtuoso Faceted Browser Copyright © 2009-2026 OpenLink Software