About: http://data.cimple.eu/claim-review/a1d3c8c01cc823a6b0a2519268a6133b2554f887b0d8363d87f6744f     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಪ್ರಸಾರದ ವೇಳೆ ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹೇಳಲು ಫೋಟೋ ವೊಂದನ್ನು ಹಂಚಿಕೊಳ್ಳಲಾಗಿದೆ ಸುವರ್ಣನ್ಯೂಸ್ ವೀಡಿಯೋದಲ್ಲಿ ನಾವು ಈ ಫೋಟೋವನ್ನು ಕಂಡುಕೊಂಡಿದ್ದೇವೆ. ಇದೇ ರೀತಿ ಅವರ ಸಾಮಾಜಿಕ ಮಾಧ್ಯಮದ ವಿವಿಧೆಡೆ ಇದೇ ಫೊಟೋವನ್ನು ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದಾಗ ತೆಗೆದ ಕೊನೆಯ ಫೋಟೋ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ. ಅಂತಹ ಪೋಸ್ಟ್ ಗಳನ್ನು ಇಲ್ಲಿಮತ್ತು ಇಲ್ಲಿ ನೋಡಬಹುದು. Also Read: ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು? ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ಹಳೆಯ ಫೊಟೋ ಎಂದು ಕಂಡುಕೊಂಡಿದ್ದೇವೆ. Fact ಸತ್ಯಶೋಧನೆಗಾಗಿ ನಾವು ವೈರಲ್ ಫೊಟೋವನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ. ಈ ವೇಳೆ ಅಕ್ಟೋಬರ್ 14, 2021 ರಂದು @withRG ಎಂಬ ಬಳಕೆದಾರರ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. ಆಸ್ಪತ್ರೆಯ ಹಾಸಿಗೆಯಲ್ಲಿ ದಿವಂಗತ ಡಾ.ಮನಮೋಹನ್ ಸಿಂಗ್ ಎಂದು ಹೇಳಿ ಹಂಚಿಕೊಳ್ಳುತ್ತಿರುವ ಅದೇ ಚಿತ್ರವನ್ನು ಈ ಪೋಸ್ಟ್ ಒಳಗೊಂಡಿತ್ತು. ಅಕ್ಟೋಬರ್ 14, 2021 ರ ಜೀ ನ್ಯೂಸ್ ವರದಿಯಲ್ಲೂ ಇದೇ ಫೋಟೋವನ್ನು ನಾವು ನೋಡಿದ್ದೇವೆ. “ಜ್ವರದ ನಂತರ ನಿಶ್ಯಕ್ತಿ ಕಾರಣ ಮಾಜಿ ಪ್ರಧಾನಿಯವರನ್ನು ಬುಧವಾರ ಸಂಜೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಯಿತು” ಇದರೊಂದಿಗೆ ಮಾಜಿ ಪ್ರಧಾನಿ ಅವರನ್ನು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು ಎಂದು ವರದಿಯಲ್ಲಿದೆ. ಭಾರತದ ಮಾಜಿ ಪ್ರಧಾನಿಯವರನ್ನು ಭೇಟಿಯಾಗಲು ಮಾಂಡವಿಯಾ ಅವರು ಏಮ್ಸ್ ಗೆ ಭೇಟಿ ನೀಡಿದ ದೃಶ್ಯಗಳನ್ನು ಒಳಗೊಂಡ ಅದೇ ಫೋಟೋವನ್ನು ಅಕ್ಟೋಬರ್ 14, 2021 ರಂದು ದಿ ಟ್ರಿಬ್ಯೂನ್ ತನ್ನ ವರದಿಯಲ್ಲಿ ಹಂಚಿಕೊಂಡಿದೆ. “ಜ್ವರದ ನಂತರ ನಿಶ್ಯಕ್ತಿಗೆ ಈಡಾಗಿ ಏಮ್ಸ್ ಗೆ ದಾಖಲಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುರುವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭೇಟಿ ಮಾಡಿ ಮತ್ತು ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ” ಎಂದಿದೆ. ಮನಮೋಹನ್ ಸಿಂಗ್ ಅವರ ಮಗಳು ದಮನ್ ಸಿಂಗ್, ಕೇಂದ್ರ ಸಚಿವರು ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಆ ಫೋಟೋವನ್ನು ತೆಗೆಯಲಾಗಿದೆ ಎಂದು ಆರೋಪಿಸಿದ್ದರು. ಏಮ್ಸ್ ನಲ್ಲಿ ಮಾಜಿ ಪ್ರಧಾನಿಯವರೊಂದಿಗೆ ಮಾಂಡವಿಯಾ ಅವರ ಭೇಟಿಯನ್ನು ಕಾಂಗ್ರೆಸ್ ಕೊಳಕು ‘ಪಿಆರ್ ಸ್ಟಂಟ್’ ಎಂದು ಟೀಕಿಸಿತ್ತು. ಆಗಸ್ಟ್ 2023 ರಲ್ಲಿ, ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯಲ್ಲಿ ರಾಜ್ಯಸಭಾ ಕಲಾಪಗಳಿಗೆ ಹಾಜರಾಗುವ ಮೂಲಕ ಸುದ್ದಿಯಾಗಿದ್ದರು. ಈ ವರ್ಷದ ಆರಂಭದಲ್ಲಿ, ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಿದ ನಂತರ ಶಾಯಿಯಿದ್ದ ಬೆರಳುತೋರಿಸುವ ಭಾರತದ ಮಾಜಿ ಪ್ರಧಾನಿಯ ಫೋಟೋ ಕೂಡ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿತ್ತು. ಆದ್ದರಿಂದ, ಈ ಸತ್ಯಶೋಧನೆಯ ಪ್ರಕಾರ, 2021ರ ಫೋಟೋವನ್ನು ಮನಮೋಹನ್ ಸಿಂಗ್ ಅವರ ಕೊನೆಯ ಫೊಟೋ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. Also Read: ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ? Result: False Our Sources Facebook post by @withRG, Dated: October 14, 2021 Report By Zee News, Dated: October 14, 2021 YouTube Video By The Tribune, Dated: October 14, 2021 Report By The Hindu, Dated: May 19, 2024 (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.123 as of May 22 2025


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data]
OpenLink Virtuoso version 07.20.3241 as of May 22 2025, on Linux (x86_64-pc-linux-musl), Single-Server Edition (126 GB total memory, 8 GB memory in use)
Data on this page belongs to its respective rights holders.
Virtuoso Faceted Browser Copyright © 2009-2026 OpenLink Software