About: http://data.cimple.eu/claim-review/b0cb4c5f4609d524326a15058db811a6223a08759b56a1dbb0935805     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ Fact ವಿಮಾನವು ಬ್ಯಾಂಕಾಂಕ್ ನಿಂದ ಕೋಲ್ಕತಾಕ್ಕೆ ಹೊರಟಿದ್ದು, ಈ ವೇಳೆ ಸುರಕ್ಷತಾ ನಿಯಮ ಪಾಲನೆ ಕುರಿತಾಗಿ ಪ್ರಯಾಣಿಕರ ನಡುವಿನ ಜಗಳ ಇದಾಗಿದೆ, ವೈರಲ್ ವೀಡಿಯೋವನ್ನು ಕೋಮು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬಂತೆ ಹೇಳಿಕೆಯೊಂದು ಹರಿದಾಡುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಸಣ್ಣ ವಿಷಯಕ್ಕೆ ಅಟ್ಟಹಾಸ ಮೆರೆದಿದ್ದಾರೆ. ವಿಮಾನ ಮುಂಬೈ ಯಿಂದ ಹೊರಟಿತ್ತು. ಎಲ್ಲಾ ಮುಸಲ್ಮಾನ್ ಜಿಹಾದಿಗಳ ಬಂಧನ ವಾಗಿದೆ….” ಎಂದಿದೆ. 0.44 ಸೆಕೆಂಡ್ ಗಳ ವೀಡಿಯೋ ಇದರಲ್ಲಿದ್ದು, ವಿಮಾನದಲ್ಲಿ ಯುವಕನೊಬ್ಬನನ್ನು ಮತ್ತೊಬ್ಬ ಮತ್ತು ಆತನೊಂದಿಗಿದ್ದವರು ಹೊಡೆಯುವುದು ಕಾಣಿಸುತ್ತದೆ. ಇದೇ ಹೇಳಿಕೆಯಿರುವ ವೀಡಿಯೋವನ್ನು ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ಗೆ (+91-9999499044) ಮನವಿ ಮಾಡಿದ್ದು ಅದನ್ನು ಅಂಗೀಕರಿಸಲಾಗಿದೆ. Also Read: ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ನಿಜವೇ? Fact Check/Verification ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿದ್ದು ಈ ಘಟನೆ ಬ್ಯಾಂಕಾಕ್-ಕೋಲ್ಕತಾ ವಿಮಾನದಲ್ಲಿ ನಡೆದ ಪ್ರಯಾಣಿಕರ ಜಗಳ ಎಂದು ತಿಳಿದುಬಂದಿದೆ. ಡಿಸೆಂಬರ್ 29, 2022ರ ಬ್ಯುಸಿನೆಸ್ ಸ್ಟಾಂಡರ್ಡ್ ವರದಿಯ ಪ್ರಕಾರ, “ಈ ವಾರದ ಆರಂಭದಲ್ಲಿ ಬ್ಯಾಂಕಾಕ್ನಿಂದ ಕೋಲ್ಕತ್ತಾಗೆ ಥಾಯ್ ಸ್ಮೈಲ್ ಏರ್ವೇಸ್ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಗಲಾಟೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ವಿಮಾನದೊಳಗಿನ ಜಗಳದ ವಿಡಿಯೋ ತುಣುಕನ್ನು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕ್ಲಿಪ್ನಲ್ಲಿ, ಒಬ್ಬ ವ್ಯಕ್ತಿಗೆ ಕೆಲವು ಸಹ-ಪ್ರಯಾಣಿಕರು ಅನೇಕ ಬಾರಿ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಪ್ರಕಾರ, ಡಿಸೆಂಬರ್ 26 ರಂದು ವಿಮಾನವು ಟೇಕಾಫ್ಗಾಗಿ ರನ್ವೇಗೆ ಬರುವ ಮೊದಲು ಈ ಘಟನೆ ಸಂಭವಿಸಿದೆ. ಅವರು ತಮ್ಮ ತಾಯಿಯೊಂದಿಗೆ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದರು. ಕೋಲ್ಕತ್ತಾ ಮೂಲದ ಆ ಪ್ರಯಾಣಿಕರು ತಮ್ಮ ಅನಾಮಧೇಯತೆಯ ಷರತ್ತಿನ ಮೇರೆಗೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ” ಎಂದಿದೆ. ಡಿಸೆಂಬರ್ 30, 2024ರ ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, “ಈ ವಾರದ ಆರಂಭದಲ್ಲಿ ಬ್ಯಾಂಕಾಕ್ನಿಂದ ಕೋಲ್ಕತ್ತಾಗೆ ಥಾಯ್ ಸ್ಮೈಲ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಕರ ನಡುವಿನ ಜಗಳದ ಬಗ್ಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಗುರುವಾರ ಪೊಲೀಸ್ ದೂರು ದಾಖಲಿಸಿದೆ ಮತ್ತು ಅಂತಹ ಪ್ರಯಾಣಿಕರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರತಾ ನಿರೀಕ್ಷಕರು ತಿಳಿಸಿದ್ದಾರೆ. “ಥಾಯ್ ಸ್ಮೈಲ್ ಏರ್ ವೇ ವಿಮಾನದಲ್ಲಿ ಪ್ರಯಾಣಿಕರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ, ಭಾಗಿಯಾಗಿರುವವರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ಅಂತಹ ವರ್ತನೆ ಸ್ವೀಕಾರಾರ್ಹವಲ್ಲ” ಎಂದು ಸಿಂಧಿಯಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.” ಎಂದಿದೆ. ಇದರೊಂದಿಗೆ, “ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ನಿಯಂತ್ರಣ ಪ್ರಾಧಿಕಾರ (ಡಿಜಿಸಿಎ) ಗೆ ಸಲ್ಲಿಸಿದ ವರದಿಯಲ್ಲಿ ವಿಮಾನಯಾನ ಸಂಸ್ಥೆಯು ಕ್ಯಾಬಿನ್ ಸಿಬ್ಬಂದಿಯ ಮನವಿಯ ಹೊರತಾಗಿಯೂ ಪ್ರಯಾಣಿಕರು ತನ್ನ ಬಿಡಿಸಿದ ಆಸನವನ್ನು ನೇರವಾಗಿ ಮಾಡಲು ನಿರಾಕರಿಸಿದ ನಂತರ ಜಗಳ ಪ್ರಾರಂಭವಾಯಿತು ಎಂದು ಹೇಳಿದೆ. ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯವಾಗಿಲ್ಲ.” ಎಂದಿದೆ. ಜನವರಿ 14, 2022ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, “ಟೇಕಾಫ್ ವೇಳೆ ಕ್ಯಾಬಿನ್ ಸಿಬ್ಬಂದಿ ಅವರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಪ್ರಯಾಣಿಕರೊಬ್ಬರು ತಮ್ಮ ಸೀಟನ್ನು ಮುಂಬದಿಗೆ ಬರುವಂತೆ ಮಾಡಿರಲಿಲ್ಲ. ತಾವು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದು ಸಿಬ್ಬಂದಿಯೊಂದಿಗೆ ಮಾತಿಗೆ ಕಾರಣವಾಗಿದ್ದು, ಈ ವೇಳೆ ಇತರ ಪ್ರಯಾಣಿಕರು ಅವರ ಮೇಲೆ ದಾಳಿ ಮಾಡಿದ್ದಾರೆ. ವೀಡಿಯೋದಲ್ಲಿ ಹಿಂದಿನ ಸೀಟಿನ ಪ್ರಯಾಣಿಕರು ಮುಂದಿನ ಸೀಟಿನ ವ್ಯಕ್ತಿಯೊಂದಿಗೆ ವಾದಿಸಿ ಅವರಿಗೆ ಹೊಡೆಯುವುದು ಮತ್ತು ಅವರ ಕನ್ನಡಕ ತೆಗೆದು ಪದೇ ಪದೇ ಮುಖಕ್ಕೆ ಹೊಡೆಯುವುದು ಈ ವೇಳೆ ಆ ವ್ಯಕ್ತಿ ಅಸಹಾಯಕರಾಗಿ ಮುಖವನ್ನು ಮುಚ್ಚಿಕೊಳ್ಳುವುದು ಕಾಣಿಸುತ್ತದೆ” ಎಂದಿದೆ. Also Read: ಮಹಾಮಳೆಗೆ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ಹಂಚುತ್ತಿರುವ ವೀಡಿಯೋ ವಿಯೆಟ್ನಾಂನದ್ದು! ಡಿಸೆಂಬರ್ 30, 2022ರ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ “ಸೋಮವಾರ, ಥಾಯ್ ಸ್ಮೈಲ್ ಫ್ಲೈಟ್ನಲ್ಲಿ ಒಬ್ಬ ವ್ಯಕ್ತಿ ವಿಮಾನ ನಿರ್ಗಮನದ ಮೊದಲು ಸಿಬ್ಬಂದಿಯಿಂದ ಸುರಕ್ಷತಾ ನಿರ್ದೇಶನಗಳನ್ನು ಗಮನಿಸಲು ನಿರಾಕರಿಸಿದ ನಂತರ ಪ್ರಯಾಣಿಕರ ಗುಂಪೊಂದು ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿತು. ಮಾತಿನ ಚಕಮಕಿಯ ನಂತರ ಈ ಘಟನೆ ನಡೆದಿರುವುದನ್ನು ವಿಮಾನದಲ್ಲಿದ್ದ ಇನ್ನೊಬ್ಬರು ವ್ಯಕ್ತಿಯೊಬ್ಬರು ಮಾಡಿದ ವೀಡಿಯೋದಲ್ಲಿ ಕಾಣಿಸುತ್ತದೆ. ಒಬ್ಬ ವ್ಯಕ್ತಿ ನಂತರ ಇನ್ನೊಬ್ಬನ ಮೇಲೆ ಕಪಾಳಮೋಕ್ಷ ಮಾಡುವುದು ಮತ್ತು ಗುದ್ದುವುದು ಇದರಲ್ಲಿ ಕಾಣಿಸುತ್ತದೆ” ಎಂದಿದೆ. ಇದೇ ವರದಿಯಲ್ಲಿ “ಸುರಕ್ಷತಾ ನಿಯಮಗಳನ್ನು ಪಾಲಿಸಲು ನಿರಾಕರಿಸಿದ ವ್ಯಕ್ತಿ ಮತ್ತು ಇನ್ನೊಬ್ಬ ಪ್ರಯಾಣಿಕರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು 37ಸಿ ಸೀಟಿನ ಸಂಖ್ಯೆಯಲ್ಲಿದ್ದ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ.” ಇನ್ನು “41ಸಿ ಸೀಟಿನಲ್ಲಿದ್ದ ವ್ಯಕ್ತಿ ಸುರಕ್ಷತಾ ನಿಯಮಗಳನ್ನು ಪಾಲಿಸದ ವ್ಯಕ್ತಿಯೊಂದಿಗೆ ವಾದವನ್ನು ಮಾಡುತ್ತ, ಕೊನೆಗೆ ಹಲ್ಲೆ ಮಾಡಿದ್ದಾರೆ, ಈ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ” ಎಂದಿದೆ. ಪ್ರಕರಣದ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಪ್ರಯಾಣಿಕರ ನಡುವೆ ಹೊಯ್ ಕೈ ನಡೆದ ಬಳಿಕ ಡಿಸೆಂಬರ್ 29, 2022ರಂದು ಥಾಯ್ ಸ್ಮೈಲ್ ಇಂಡಿಯಾ ಏರ್ ಲೈನ್ ಈ ಕುರಿತು ಕ್ಷಮೆ ಕೇಳಿರುವುದು ಗೊತ್ತಾಗಿದೆ. ಈ ಕುರಿತಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಅದು ಇಲ್ಲಿದೆ. ಈ ಪ್ರಕರಣದ ಕುರಿತ ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ, ನೋಡಬಹುದು. Conclusion ಸತ್ಯಶೋಧನೆಯಲ್ಲಿ ಕಂಡುಬಂದಂತೆ ಯಾವುದೇ ವರದಿಗಳಲ್ಲಿ ಕೋಮು ವಿಚಾರಕ್ಕೆ ಪ್ರಯಾಣಿಕನಿಗೆ ಥಳಿಸಿರುವ ವಿಚಾರ ಪ್ರಸ್ತಾಪವಾಗಿಲ್ಲ ಜೊತೆಗೆ ಎರಡು ಕೋಮಿನ ವ್ಯಕ್ತಿಗಳು ಎಂಬ ಬಗ್ಗೆಯೂ ಎಲ್ಲಿಯೂ ಪ್ರಸ್ತಾಪವಾಗಿರುವುದು ಕಂಡುಬಂದಿಲ್ಲ. ವಿಮಾನವು ಬ್ಯಾಂಕಾಂಕ್ ನಿಂದ ಕೋಲ್ಕತಾಕ್ಕೆ ಹೊರಟಿದ್ದು, ಈ ವೇಳೆ ಸುರಕ್ಷತಾ ನಿಯಮ ಪಾಲನೆ ಕುರಿತಾಗಿ ಪ್ರಯಾಣಿಕರ ನಡುವಿನ ಜಗಳ ಇದಾಗಿದೆ ಎಂದು ಗೊತ್ತಾಗಿದೆ. Result: False Our Sources Report By Business standard, Dated: December 29, 2022 Report By The News Minute, Dated: December 30, 2022 Report By Times of India, Dated: January 14, 2023 Report By Hindustan Times, Dated: December 30, 2022 X post By Thai Smile India, Dated: December 29, 2022 ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software