About: http://data.cimple.eu/claim-review/cb7ebae1ad40df7eabe1be131090694a144e44ac746edf45251b5ec6     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ ಚೆಕ್: ವಿಶ್ವಕಪ್ನಲ್ಲಿ ಪಾಕಿಸ್ತಾನ ಸೋತಿತೆಂದು ಭಾರತೀಯ ಯುವತಿ ಅಳುತ್ತಿರುವ ವೀಡಿಯೋ ವೈರಲ್ ವಿಶ್ವಕಪ್ನಲ್ಲಿ ಪಾಕಿಸ್ತಾನ ಸೋತಿತೆಂದು ಭಾರತೀಯ ಯುವತಿ ಅಳುತ್ತಿರುವ ವೀಡಿಯೋ ವೈರಲ್ Claim :ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ದ ಸೋತಿತೆಂದು ಬಾಬರ್ ಹಜಮ್ನ ಭಾರತೀಯ ಅಭಿಮಾನಿಯೊಬ್ಬರು ಅಳುತ್ತಿರುವ ವೀಡಿಯೋ ವೈರಲ್ ಆಗಿದೆ. Fact :2023ರ ಪಾಕಿಸ್ತಾನ ಪಂದ್ಯದ ನಂತರ ಪಾಕಿಸ್ತಾನಿ ಯುವತಿ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನಾದ ಬಾಬರ್ ಹಜಾಮ್ನನ್ನು ಭೇಟಿ ಮಾಡಿದ ಸಂತೋಷದಲ್ಲಿ ಅಳುತ್ತಿರುವ ದೃಶ್ಯವಿದು. 13ನೇ ICC ಪುರುಷರ ODI ವಿಶ್ವಕಪ್ ಆರಂಭವಾಯಿತು.ಅಹಮದಾಬಾದ್ನಲ್ಲಿ ನಡೆಯುವ ಈ ಪಂದ್ಯದಲ್ಲಿ 10 ದೇಶಗಳ ತಂಡಗಳು ಭಾಗವಹಿಸುತ್ತಿವೆ. ಭಾರತದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಹೀನಾಯವಾಗಿ ಸೋತಿತ್ತು. ಪಾಕಿಸ್ತಾನದ ಅಭಿಮಾನಗಳೂ ಈ ಪಂದ್ಯದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಪಾಕಿಸ್ತಾನದ ಸಾಕಷ್ಟು ಮಾಧ್ಯನ ಸಂಸ್ಥೆಗಳು ಬೇಸರಗೊಂಡು ಪಾಕಿಸ್ತಾನಿಯ ಅಭಿಮಾನಿಗಳೊಂದಿಗೆ ಸಂದರ್ಶನವನ್ನು ನಡೆಸಿತ್ತು. ಆ ಸಂದರ್ಶನದಲ್ಲಿ ಭಾರತದ ಅಭಿಮಾನಿಯೊಬ್ಬರು ಪಾಕಿಸ್ತಾನದ ಕೆಪ್ಟನ್ ಭಾಬರ್ ಅಜಮ್ನನ್ನು ಭೇಟಿ ಮಾಡಿರುವ ಸಂತೋಷದಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಪಂದ್ಯದಲ್ಲಿ ಸೋತರೇನು ಅಭಿಮಾನಿಯನ್ನ ಗಳಿಸಿದ್ದೇವೆ #cwc2023 #cricket #iccworldcup2023 #babar" ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಂದ್ಯದಲ್ಲಿ ಸೋತರೂ ಭಾರತೀಯ ಹೆಣ್ಣುಮಕ್ಕಳ ಮನ ಗೆದ್ದಿದ್ದಾರೆ ಎಂದು ಕ್ಯಾಪ್ಷನ್ನೀಡಿ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿರುವ ಕಾಣಿಸುವ ಯುವತಿ ಪಾಕಿಸ್ತಾನಿಯ ಅಭಿಮಾನಿ, ಭಾರತೀಯ ಅಭಿಮಾನಿಯೂ ಅಲ್ಲ. 2023ರ ICC ಪುರುಷರ ODI ವಿಶ್ವಕಪ್ಸಮಯದಲ್ಲಿ ಚಿತ್ರೀಕರಿಸಿದ ವೀಡಿಯೋವು ಅಲ್ಲ. ವೀಡಿಯೋವನ್ನು ಗಮನಿಸಿದರೆ ಅಳುತ್ತಿರುವ ಅಭಿಮಾನಿಯ ಹಿಂದೆ ʼಸೌತ್ ಪಂಜಾಬ್ ಕ್ರಿಕೆಟ್ʼ ಎಂದು ಬರೆದಿರುವ ದೊಡ್ಡ ಪ್ಲಕ್ಕಾರ್ಟ್ನ್ನು ಸಹ ನೋಡಬಹುದು. ಸೌತ್ಪಂಜಾಬ್ಕ್ರಿಕೆಟ್ʼ ಮತ್ತು ಹಿಂದೆ ಕಾಣುವ ಲೋಗೋವನ್ನು ಪರಿಶೀಲಿಸಿದಾಗ ತಿಳಿದಿದ್ದು ಈ ವಿಡಿಯೋ ಚಿತ್ರಿಕರಿಸಿದ್ದು ಪಾಕಿಸ್ತಾನದಲ್ಲಿ. ವೀಡಿಯೊದಲ್ಲಿ ಕಂಡುಬರುವ ಲೋಗೋ ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸೇರಿದೆ. ನಾವು ಆ ಯುವತಿ ಧರಿಸಿರುವ ಜಾಕೆಟ್ನ ಮೇಲಿರುವ ಪಿಸಿಬಿ ಲೋಗೋವನ್ನು ಸಹ ನೋಡಬಹುದು. ಎಟಿಎಫ್ ಸೌತ್ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ನ ಅಧಿಕೃತ ಫೇಸ್ಬುಕ್ ಅಧಿಕೃತ ಪೇಜ್ನಲ್ಲಿ ಈ ಚಿತ್ರದಲ್ಲಿರುವವರು ದಕ್ಷಿಣ ಪಂಜಾಬ್, ಮುಲ್ತಾನ್ , ಪಾಕಿಸ್ತಾನಕ್ಕೆ ಸೇರಿದವರು ಎಂದು ಪೋಸ್ಟ್ಮಾಡಿದ್ದಾರೆ. ನಾವು ವೀಡಿಯೋದಲ್ಲಿರುವ ಕೆಲವು ಫ್ರೇಮ್ಗಳನ್ನು ಬಳಸಿಕೊಂಡು ರಿವರ್ಸ್ಇಮೇಜ್ನ ಮೂಲಕ ಹುಡುಕಾಟ ನಡೆಸಿದಾದ ನಮಗೆ ತಿಳಿದು ಬಂದಿದ್ದು ಈ ವಿಡಿಯೋ ಡಿಸಂಬರ್2022ರಲ್ಲಿ ಚಿತ್ರೀಕರಿಸಲಾಗಿದೆಂದು. ಈ ವಿಡಿಯೋವನ್ನು BBN ಸ್ಪೋರ್ಟ್ಸ್ ಯೂಟ್ಯೂಬ್ಚಾನೆಲ್ನಲ್ಲಿ "ಸೆಲ್ಫಿ ವಿತ್ಬಾಬರ್ಆಜಮ್ಎಂದು ಮುಲ್ತಾನಿ ಎಂಬ ಯುವತಿ ಅಳುತ್ತಿರುವ ವೀಡಿಯೊ ಜೊತೆಗೆ ಶೀರ್ಷಿಕೆ ನೀಡಿ ಅಪ್ಲೋಡ್ ಮಾಡಲಾಗಿತ್ತು. “Multani girl crying after selfie with Babar Azam” ಎಂಬ ಶೀರ್ಷಿಕೆಯೊಂದಿಗಿನ ವೀಡಿಯೋವನ್ನು ಕಾಣಬಹುದು. 12ರಂದು ಡಿಸೆಂಬರ್ 2022Samaa TV ಯುಟ್ಯೂಬ್ಚಾನೆಲ್ನಲ್ಲಿ “ಯುವತಿ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನಾದ ಬಾಬರ್ಹಜಾಮ್ನನ್ನು ಭೇಟಿ ಮಾಡಿದ ಸಂತೋಷದಲ್ಲಿ ಅಳುತ್ತಿರುವ ದೃಶ್ಯವಿದು ಎಂದು ಪೋಸ್ಟ್ ಮಾಡಿದ್ದಾರೆ ಬಿಬಿಎನ್ ಸ್ಪೋರ್ಟ್ಸ್ ಮತ್ತು ಸಾಮಾ ಟಿವಿ ಎರಡೂ ಪಾಕಿಸ್ತಾನದ ಚಾನೆಲ್ಗಳು. BBN ಸ್ಪೋರ್ಟ್ಸ್ ಪಾಕಿಸ್ತಾನ ಕ್ರಿಕೆಟ್ ಮತ್ತು ಭಾರತದ ಕ್ರಿಕೆಟ್ನ ಆಳವಾದ ವಿಶ್ಲೇಷಣೆಯನ್ನು ನೀಡುವ ಕ್ರೀಡಾ ಸುದ್ದಿ ವಾಹಿನಿ. BBN ದೂರದರ್ಶನ, ಪತ್ರಿಕಾ, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ 12 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ವೃತ್ತಿಪರ ಪತ್ರಕರ್ತರ ತಂಡವನ್ನು BBN ಹೊಂದಿದೆ. SAMAA TV ಪಾಕಿಸ್ತಾನದ ದೂರದರ್ಶನ ಚಾನೆಲ್. ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ದ ಸೋತಿತೆಂದು ಕ್ಯಾಪ್ಟನ್ಬಾಬರ್ಅಜಮ್ನ, ಭಾರತೀಯ ಅಭಿಮಾನಿಯೊಬ್ಬರು ಅಳುತ್ತಿದ್ದಾಳೆಂದು ವೈರಲ್ಆದ ಸುದ್ದಿ ಸುಳ್ಳು. 2023ರ ಪಾಕಿಸ್ತಾನ ಪಂದ್ಯದ ನಂತರ ಪಾಕಿಸ್ತಾನಿ ಯುವತಿ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನಾದ ಬಾಬರ್ಹಜಾಮ್ನನ್ನು ಭೇಟಿ ಮಾಡಿದ ಸಂತೋಷದಲ್ಲಿ ಅಳುತ್ತಿರುವ ದೃಶ್ಯವಿದು.
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software