About: http://data.cimple.eu/claim-review/e395cb0bc8140e8296321fa469468635ccf829590c80b5ad4419cb72     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors ಖಾಲಿ ಹೊಟ್ಟೆಯಲ್ಲಿ ಆಪಲ್ ತಿಂದರೆ ಮೈಗ್ರೇನ್ ನೋವು ಕಡಿಮೆಯಾಗುತ್ತದೆ ಎಂಬ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮಿನಲ್ಲಿ “ನಿಮಗಿದು ಗೊತ್ತ? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ಮೈಗ್ರೇನ್ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದೆ. ನ್ಯೂಸ್ ಚೆಕರ್ ಈ ಕುರಿತು ಸತ್ಯ ಪರಿಶೀಲನೆಯನ್ನು ನಡೆಸಿದ್ದು ಇದೊಂದು ತಪ್ಪಾದ ಸಂದರ್ಭ ಎಂದು ಪತ್ತೆ ಮಾಡಿದೆ. Fact Check/Verification ಮೈಗ್ರೇನ್ ಎನ್ನುವುದು ಒಂದು ತಲೆನೋವಾಗಿದ್ದು, ಇದು ಸಾಮಾನ್ಯವಾಗಿ ತಲೆಯ ಒಂದು ಬದಿಯಲ್ಲಿ ತೀವ್ರವಾದ ನೋವು ಅಥವಾ ನಾಡಿಮಿಡಿತದ ಸಂವೇದನೆಯನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಬೆಳಕು, ಧ್ವನಿಗೆ ತೀವ್ರ ಸಂವೇದನೆಯನ್ನು ಉಂಟುಮಾಡುತ್ತದೆ. ಮೈಗ್ರೇನ್ ಎನ್ನುವುದು ಗಂಟೆಗಳಿಂದ ದಿನಗಳವರೆಗೆ ಇರುತ್ತದೆ. ನೋವು ತುಂಬ ತೀವ್ರವಾಗಿರುತ್ತದೆ ಮತ್ತು ಅದು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತದೆ. ಔಷಧಿಗಳು ಕೆಲವು ರೀತಿಯ ಮೈಗ್ರೇನ್ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದರಿಂದ ಅದು ಕಡಿಮೆ ನೋವು ಉಂಟುಮಾಡುತ್ತದೆ. ಸ್ವಸಹಾಯ ಪರಿಹಾರಗಳು ಮತ್ತು ಜೀವನಶೈಲಿಯ ಬದಲಾವಣೆಗಳೊಂದಿಗೆ ಸರಿಯಾದ ಔಷಧಗಳು ಸಹಾಯ ಮಾಡಬಹುದು. ಕ್ಲೇಮಿನಲ್ಲಿ ಹೇಳಿರುವಂತೆ ಸೇಬಿನಿಂದ ಮೈಗ್ರೇನ್ ನೋವು ನಿವಾರಣೆಯಾಗುತ್ತದೆ ಎಂದು ಸಾಬೀತು ಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ 2020ರ ಸಂಶೋಧನಾ ಪ್ರಬಂಧವೊಂದರಲ್ಲಿ ಆಹಾರ ಮತ್ತು ಮೈಗ್ರೇನ್ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲಾಗಿದೆ. ಆ ಪ್ರಕಾರ ಆಹಾರವು ಮೈಗ್ರೇನ್ ನೋವನ್ನು ನಿವಾರಿಸುತ್ತದೆ ಅಥವಾ ನೋವನ್ನು ಪ್ರಚೋದಿಸುತ್ತದೆ ಎಂದು ಹೇಳಿದೆ. ಆಹಾರ ಎನ್ನುವುದು ಅತ್ಯಂ ಮುಖ್ಯವಾದ ಮತ್ತು ಬದಲಾವಣೆ ಮಾಡಬಹುದಾದ ಅಂಶವಾಗಿದೆ. ಆಹಾರ ಮೈಗ್ರೇನ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಂಶೋಧಕರು ಇನ್ನಷ್ಟು ಗಮನ ಹರಿಸಬೇಕಿದೆ. ಆಹಾರವು ಮೈಗ್ರೇನ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವ ಬಗ್ಗೆ ವೈಜ್ಞಾನಿಕ ಪುರಾವೆಗಳ ಕೊರತೆ ಇದೆ. Also Read: ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ ಕ್ಷಯ ರೋಗ ನಿವಾರಣೆ: ಸತ್ಯವೇನು? ಈ ಸಂಶೋಧನಾ ಪ್ರಬಂಧವು ಕಾಲ್ಪನಿಕವಾಗಿ, ವಿಶೇಷವಾಗಿ ಒಬ್ಬ ಅನುಭವಿ ವೈದ್ಯರು ವ್ಯಕ್ತಿಯನ್ನು ನೋಡದೇ ಇದ್ದರೆ ಪೌಷ್ಟಿಕಾಂಶದ ಕೊರತೆ ಅಥವಾ ಅದರ ಹೆಚ್ಚಳದಿಂದ ಪ್ರತಿಕೂಲ ಪರಿಣಾಮಗಳ ಅಪಾಯ ಯಾವಾಗಲೂ ಇರುತ್ತದೆ ಎಂದು ಹೇಳುತ್ತದೆ. ಮೈಗ್ರೇನ್ ಬೆಳವಣಿಗೆಯನ್ನು ತಡೆಯುವ ಅಥವಾ ನಿಧಾನಗೊಳಿಸುವ ಜೀವನಶೈಲಿ ಮತ್ತು ನಡವಳಿಕೆಯ ಬದಲಾವಣೆಗಳಿಗೆ ಜನರು ಗಮನ ಹರಿಸಬೇಕು. ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ನಿಯಂತ್ರಣದಲ್ಲಿ ಇಡುವುದರೊಂದಿಗೆ ದಿನದಲ್ಲಿ ಸಾಕಷ್ಟು ದ್ರವಾಹಾರ ತೆಗೆದುಕೊಳ್ಳುವುದು, ನಿದ್ದೆ, ನೈರ್ಮಲ್ಯ ಕಾಪಾಡಿಕೊಳ್ಳುವುದು, ವಿಶ್ರಾಂತಿ, ಉಸಿರಾಟದ ವ್ಯಾಯಾಮ ಮಾಡುವುದು ಮತ್ತು ಸಾಮಾಜಿಕ ಜೀವನ ನಿರ್ವಹಣೆಯನ್ನು ಮಾಡುವುದರಿಂದ ಜೀವನದ ಗುಣಮಟ್ಟ ಸುಧಾರಣೆ ಆಗುವುದರೊಂದಿಗೆ ಮೈಗ್ರೇನ್ ನಿಂದ ಕೂಡ ಸುಧಾರಣೆ ಕಾಣಬಹುದು ಎಂದು ಹೇಳುತ್ತದೆ. ಆಹಾರ ತಜ್ಞೆ ಪ್ರಿಯಾಂಕ ಅವರ ಮಾಹಿತಿ ಪ್ರಕಾರ, “ಆಹಾರದಿಂದ ಮೈಗ್ರೇನ್ ಹೆಚ್ಚಾಗುವಿಕೆಯು ಒಂದು ಸಾಮಾನ್ಯವಾದ ವಿಚಾರವಾಗಿದೆ. ಯಾವು ಆಹಾರದಿಂದ ಅಂತಹ ಸಮಸ್ಯೆಯಾಗುತ್ತದೆ ಎಂಬುದನ್ನು ಗುರುತಿಸಬಹುದು. ಮೈಗ್ರೇನ್ ನಿವಾರಣೆ ಒಂದು ಸಂಕೀರ್ಣವಾದ ಮತ್ತು ಬಹು ಆಯಾಮದ ವಿಧಾನ ಅಗತ್ಯವಿರುವುದರಿಂದ ಖಾಲಿಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ಮೈಗ್ರೇನ್ ನಿವಾರಣೆಯಾಗುತ್ತದೆ ಎಂದು ನಾವು ಹೇಳಲಾಗುವುದಿಲ್ಲ” ಎಂದು ಹೇಳಿದ್ದಾರೆ. ನರಶಾಸ್ತ್ರ ವೈದ್ಯರಾದ ಅಭಿಷೇಕ್ ಜುನೇಜಾ ಅವರು ಹೇಳುವಂತೆ “ವಿಟಮಿನ್ಗಳು, ಮಿನರಲ್ಗಳು, ಆಂಟಿಆಕ್ಸಿಡೆಂಟ್ಗಳು ಹೆಚ್ಚಿರುವ ಹಸಿರು ಎಲೆ-ತರಕಾರಿಗಳನ್ನು ಸೇವಿಸುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಆದರೆ ಸೇಬನ್ನು ತಿನ್ನುವುದರಿಂದ ಮಾತ್ರವೇ ಮೈಗ್ರೇನ್ ಪರಿಹಾರವಾಗುತ್ತದೆ ಎಂದು ಹೇಳಲಾಗದು” ಎಂದು ಹೇಳಿದ್ದಾರೆ. Conclusion ಆದ್ದರಿಂದ ಸತ್ಯಶೋಧನೆ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಆಪಲ್ ತಿನ್ನುವುದರಿಂದ ಮೈಗ್ರೇನ್ ದೂರವಾಗುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. Result: Missing Context Our Sources Self-Analysis A study on Migraine and Diet, by Parisa Gazerani Faculty of Medicine, Laboratory of Molecular Pharmacology, Department of Health Science and Technology, Aalborg University, Denmark. Dated: June 3, 2020. Conversation with Neurologist Dr.Abhishek Juneja Conversation with Dietician Priyanka (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software