About: http://data.cimple.eu/claim-review/e647c5bce1b0aee19693abc93e70551a144e608369a3c5a02f3a7d14     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪುಷ್ಪಾ ಚಿತ್ರದ ಖ್ಯಾತಿಯ ನಟ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದಾರಾ? 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪುಷ್ಪಾ ಚಿತ್ರದ ಖ್ಯಾತಿಯ ನಟ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದಾರಾ? Claim :ಟಾಲಿವುಡ್ ನಟ ಅಲ್ಲು ಅರ್ಜುನ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ Fact :ಅಲ್ಲು ಅರ್ಜುನ್ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರುವ ವೈರಲ್ ವಿಡಿಯೋ ಇತ್ತೀಚಿನದಲ್ಲ. 2022ರಲ್ಲಿ ನ್ಯೂಯಾರ್ಕ್ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಲ್ಲಿನ ಮೆರವಣಿಗೆಯಲ್ಲಿ ಪಾಲ್ಗೊಂಡ ವಿಡಿಯೋವದು. 2024ರಲ್ಲಿ ನಡೆಯುವ ಮೊದಲ ಹಂತದ ಸಾರ್ವರ್ತಿಕ ಚುನಾವಣೆಯಯ ಪೋಲಿಂಗ್ನಲ್ಲಿ 102 ಲೋಕ ಸಭಾ ಸ್ಥಾನಗಳಲ್ಲಿ 21 ರಾಜ್ಯಗಳಲ್ಲಿ, 65.5% ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲನೇ ಹಂತದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿತು. ಸೂಪರ್ಸ್ಟಾರ್ ಅಲ್ಲು ಅರ್ಜುನ್ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. "ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. “कांग्रेस के सम्मान में अल्लू अर्जून मैदान में। ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. कांग्रेस के सम्मान में अल्लू अर्जून मैदान में।@alluarjun #Elections2024 pic.twitter.com/7DUvAyjbLf— Er. Priyanka Jha (@JhaPriyankha) April 20, 2024 ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. 2022 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಇಂಡಿಯಾ ಡೇ ಪರೇಡ್ನಲ್ಲಿ ಗ್ರ್ಯಾಂಡ್ ಮಾರ್ಷಲ್ನಲ್ಲಿ ನಟ ಅಲ್ಲು ಅರ್ಜುನ್ ಭಾಗವಹಿಸಿದ ವೀಡಿಯೊವನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್ಗಳ ಮೂಲಕ ಗೂಗಲ್ ರಿವರ್ಸ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಸಾಕಷ್ಟು ವೆಬ್ಸೈಟ್ಗಳು ಹಲವಾರು ಲೇಖನಗಳನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಶಟರ್ಸ್ಟಾಕ್ ತನ್ನ ವರದಿಯಲ್ಲಿ "ಎನ್ಐಸಿ ಇಂಡಿಯಾ ಡೇ ಪರೇಡ್, ನ್ಯೂಯಾರ್ಕ್, NY, ಯುನೈಟೆಡ್ ಸ್ಟೇಟ್ಸ್ - 21 ಆಗಸ್ಟ್ 2022" ಎಂಬ ಶೀರ್ಷಿಕೆಯಡಿಯಲ್ಲಿ ಕೆಲವು ಚಿತ್ರಗಳನ್ನು ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು. ನಟ ಅಲ್ಲು ಅರ್ಜುನ್ ನ್ಯೂಯಾರ್ಕ್ ನಗರದ ಮ್ಯಾಡಿಸನ್ ಅವೆನ್ಯೂದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನೋತ್ಸವದಲ್ಲಿ ಭಾಗವಹಿಸಿದ ಫೋಟೋಗಳನ್ನು ನಾವು ಆಗಸ್ಟ್ 21, 2022 ಪ್ರಕಟಿಸಿದ ವರದಿಯಲ್ಲಿ ಕಾಣಬಹುದು. ಇದೇ ಚಿತ್ರಗಳನ್ನು ತೆಲುಗು ಫಿಲ್ಮ್ನಗರದ ಎಕ್ಸ್ ಖಾತೆಯಲ್ಲಿ ಆಗಸ್ಟ್ 22, 2022 ರಂದು "ಐಕಾನ್ ಸ್ಟಾರ್ ಈಗ ಗ್ಲೋಬಲ್ ಸ್ಟಾರ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಗ್ರ್ಯಾಂಡ್ ಮಾರ್ಷಲ್ ನಡೆಸಿದ ಪ್ರತಿಷ್ಠಿತ ಇಂಡಿಯಾ ಡೇ ಪರೇಡ್ನಲ್ಲಿ ಕಾಣಿಸಿಕೊಂಡ ನಟ @ಅಲ್ಲುಅರ್ಜುನ್ ಅವರ ಮೇಲೆ ಐದು ಲಕ್ಷ ಜನರು ಪ್ರೀತಿಯನ್ನು ಸುರಿಸುತ್ತಿರುವ ಬೃಹತ್ ಜನಸಮೂಹಕ್ಕೆ ನ್ಯೂಯಾರ್ಕ್ ಸಾಕ್ಷಿಯಾಗಿದೆ. Icon Star is Now a Global Star! 🌟— Telugu FilmNagar (@telugufilmnagar) August 22, 2022 New York witnessed a mammoth crowd of over 5L people showering love at @alluarjun as he graced the prestigious India Day parade as the Grand Marshal. #GrandMarshalAlluArjunAtNYC #AlluArjun #Tollywood #TeluguFilmNagar pic.twitter.com/qofE12q60b 10tv.in ಆಗಸ್ಟ್ 22, 2022 ರಂದು ಪ್ರಕಟಿಸಿದ ವರದಿಯಲ್ಲಿ "ಅಲ್ಲು ಅರ್ಜುನ್ ಅಮೇರಿಕಾದಲ್ಲಿ ಭಾರತದ ಸ್ವಾತಂತ್ರ್ಯ ಆಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸುತ್ತಾರೆ" ಎಂದು ಪ್ರಕಟಿಸಲಾಗಿತ್ತು. ಅಷ್ಟೇ ಅಲ್ಲ ಖುದ್ದು ನಟ ಅಲ್ಲು ಅರ್ಜುನ್ ಸಹ ತನ್ನ ಎಕ್ಸ್ ಖಾತೆಯಲ್ಲಿ ಅಮೇರಿಕಾದಲ್ಲಿ ನಡೆದ 75ನೇ ಭಾರತದ ಸ್ವಾತಂತ್ರ್ಯ ಆಚರಣೆಯಲ್ಲಿ ಅತಿಥಿಯಾಗಿ ಭಾಗವಹಿದ್ದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. It was a pleasure meeting the Mayor of New York City . Very Sportive Gentleman. Thank You for the Honours Mr. Eric Adams . Thaggede Le ! @ericadamsfornyc @NYCMayorsOffice pic.twitter.com/LdMsGy4IE0— Allu Arjun (@alluarjun) August 22, 2022 NDTV ವರದಿ ಪ್ರಕಾರ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ನಡೆದ 40ನೇ ವಾರ್ಷಿಕ ಇಂಡಿಯಾ ಡೇ ಪರೇಡ್ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರನ್ನು ಗ್ರ್ಯಾಂಡ್ ಮಾರ್ಷಲ್ ಆಗಿ ಆಹ್ವಾನಿಸಲಾಯಿತ್ತು. ಅದೇ ಸಂದರ್ಭದಲ್ಲಿ, ನಟ ನ್ಯೂಯಾರ್ಕ್ ನಗರದ ಮೇಯರ್ ಅವರನ್ನು ಭೇಟಿಯಾದಾಗ ಕ್ಲಿಕ್ಕಿಸಿಕೊಂಡತಹ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಹೀಗಾಗಿ ಅಲ್ಲು ಅರ್ಜುನ್ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರುವ ವೈರಲ್ ವಿಡಿಯೋ ಇತ್ತೀಚಿನದಲ್ಲ ಎಂದು ಸಾಭೀತಾಗಿದೆ. 2022ರಲ್ಲಿ ನ್ಯೂಯಾರ್ಕ್ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಲ್ಲಿನ ಮೆರವಣಿಗೆಯಲ್ಲಿ ಪಾಲ್ಗೊಂಡ ವಿಡಿಯೋವದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software