About: http://data.cimple.eu/claim-review/e7dda7e9229f5df12010c520884c669fb0fb0b96d0bb8e51b606376e     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Fact Check ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್ ವೀಡಿಯೋ ಸತ್ಯವೇ? ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮುನ್ನ ಪಕ್ಷಿಗಳು ಹಾರಿ ಹೋಗಿದ್ದು, ಈ ಮೂಲಕ ಜನಸಾಮಾನ್ಯರಿಗೆ ಮುನ್ಸೂಚನೆ ನೀಡಿವೆ ಎಂದು ಹೇಳುವ ಕುರಿತ ವೈರಲ್ ವೀಡಿಯೋ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಕ್ಲೇಮ್ ಒಂದರಲ್ಲಿ “ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೂ ಮುಂಚೆ ಪಕ್ಷಿಗಳು ಜನಸಾಮಾನ್ಯರಿಗೆ ನೀಡಿದ ಮುನ್ಸೂಚನೆ ಇದಾಗಿತ್ತು. ಅವುಗಳಿಗೆ ಅಷ್ಟಾದರೂ ನಿಯತ್ತಿದೆ ಆದ್ರೆ ನಮಗೆ ಬೇಸಿಗೆಯಲ್ಲಿ ಒಂದು ಹನಿ ನೀರು ಸಹ ಅವುಗಳಿಗಾಗಿ ಮೀಸಲಿಡಲ್ಲ” ಎಂದು ಹೇಳಲಾಗಿದೆ. ಈ ಬಗ್ಗೆ ನ್ಯೂಸ್ಚೆಕರ್ ಸತ್ಯ ಶೋಧನೆ ನಡೆಸಿದ್ದು, ಇದು ಟರ್ಕಿ ಭೂಕಂಪಕ್ಕೆ ಸಂಬಂಧಪಟ್ಟಿದ್ದಲ್ಲ ಮತ್ತು ಹಕ್ಕಿಗಳು ಹಾರಿಹೋದ ವಿದ್ಯಮಾನ ಇದಲ್ಲ ಎಂದು ತಿಳಿದುಬಂದಿದೆ. Fact Check/Verification ಸತ್ಯಶೋಧನೆಗಾಗಿ, ನಾವು ವೈರಲ್ ವೀಡಿಯೋದದ ಸ್ಕ್ರೀನ್ ಗ್ರ್ಯಾಬ್ಗಳನ್ನು ಪಡೆದು, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ಇದಕ್ಕೆ ಸಂಬಂಧಪಟ್ಟಂತೆ ಹಲವು ಮಾಹಿತಿಗಳು ಲಭ್ಯವಾಗಿವೆ. ಸರ್ಚ್ ವೇಳೆ ಇದು ಬ್ಲ್ಯಾಕ್ಬರ್ಡ್ಗಳು ಹಾರುತ್ತಿರುವ ದೃಶ್ಯಾವಳಿಗಳು ಎಂದು ತಿಳಿದುಬಂದಿದೆ. ಡೈಲಿ ಮೈಲ್ ಜನವರಿ 25, 2017ರಂದು ಈ ಕುರಿತು ವರದಿ ಮಾಡಿದ್ದು “ಹೂಸ್ಟನ್ ಫ್ರೀ ವೇ ಮೇಲ್ಭಾಗದಲ್ಲಿ ಸಾವಿರಾರು ಬ್ಲ್ಯಾಕ್ಬರ್ಡ್ಗಳು ಏಕಕಾಲಕ್ಕೆ ಹಾರಿದ್ದು ಈ ವೇಳೆ ಕಾರುಗಳು ನಿಧಾನವಾಗಿ ಸಾಗಿವೆ. ಕೆಲವು ಹಕ್ಕಿಗಳು ರಸ್ತೆ ವಿಭಜಕದಲ್ಲೂ ಕೂತಿರುವುದು ಕಂಡು ಬಂದಿವೆ” ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ದಿ ಐರಿಷ್ ಸನ್ ಕೂಡ ಜನವರಿ 26, 2015ರಂದು ಈ ವಿದ್ಯಮಾನವನ್ನು ವರದಿ ಮಾಡಿದ್ದು “ಇದು ಕಾಗೆಗಳು ಏಕಾಏಕಿ ಹಾರಿರುವ ವಿದ್ಯಮಾನ ಎಂದು ಹೇಳಿದೆ. ಸಾವಿರಾರು ಹಕ್ಕಿಗಳು ಅಮೆರಿಕದ ಹೂಸ್ಟನ್ ಫ್ರೀ ವೇನಲ್ಲಿ ಏಕಾಏಕಿ ಹಾರಿದ್ದರಿಂದ ಗಾಬರಿಗೊಂಡ ಕಾರು ಚಾಲಕರು ಬ್ರೇಕ್ ಅದುಮಿದರು. ಕೆಲವರು ಇನ್ನೇನು ಹಕ್ಕಿಗಳು ಕಾರಿನ ಗಾಜಿಗೆ ಬಡಿಯುತ್ತವೆ ಎಂದು ಗಾಬರಿಗೊಂಡರು” ಎಂದು ತನ್ನ ವರದಿಯಲ್ಲಿ ಹೇಳಿದೆ. Also Read: 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆಯೇ? ವೈರಲ್ ಪೋಸ್ಟ್ ನಿಜವೇ? Osvaldo Highlights ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲೂ ಇದೇ ವೈರಲ್ ವೀಡಿಯೋ ಪತ್ತೆಯಾಗಿದ್ದು, ಜನವರಿ 22, 2017ರಂದು ಅದನ್ನು ಅಪ್ಲೋಡ್ ಮಾಡಲಾಗಿದೆ. Crows Crowd the City of Houston ಹೂಸ್ಟನ್ ಎಂಬ ಶೀರ್ಷಿಕೆಯಲ್ಲಿ ಈ ವೀಡಿಯೋ ಇದೆ. ಇನ್ನು ಹಕ್ಕಿಗಳು ಹಾರಿದ ಜಾಗದ ಬಗ್ಗೆ ಖಚಿತ ಪಡಿಸಿಕೊಳ್ಳಲು ರಾಯಲ್ ಸೊನೆಸ್ಟಾ ಹೂಸ್ಟನ್ ಎಂದು ಗೂಗಲ್ ಅರ್ತ್ ಸರ್ಚ್ ನಡೆಸಲಾಗಿದ್ದು ಇದು ಹೂಸ್ಟ್ನನ ಫ್ರೀ ವೇ ಪ್ರದೇಶ ಎಂಬುದನ್ನು ಫಲಿತಾಂಶದ ಮೂಲಕ ಖಚಿತಪಡಿಸಲಾಗಿದೆ. ಇದರ ಗೂಗಲ್ ಮ್ಯಾಪ್, ಸ್ಕ್ರೀನ್ ಶಾಟ್, ಅನ್ನು ಇಲ್ಲಿ ನೋಡಬಹುದು. Conclusion ಈ ಸತ್ಯ ಶೋಧನೆಯ ಪ್ರಕಾರ, ಹಕ್ಕಿಗಳು ಏಕಾಏಕಿ ಹಾರಿದ ವಿದ್ಯಮಾನ ನಡೆದಿರುವುದು 2017ರಲ್ಲಿ ಅದು ಇತ್ತೀಚೆಗೆ ನಡೆದ ಟರ್ಕಿಯ ಭೂಕಂಪದ ಮೊದಲಲ್ಲ. ಆದ್ದರಿಂದ ಟರ್ಕಿ ಭೂಕಂಪದ ಮೊದಲು ಏಕಾಏಕಿ ಹಕ್ಕಿಗಳು ಹಾರುತ್ತಿರುವ ದೃಶ್ಯ ಇದಲ್ಲ. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ. Result: False Our Source: Report by, Daily Mail Dated: January 25, 2017 Report by, The Irish Sun Dated: January 27, 2017 Google Earth
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software