About: http://data.cimple.eu/claim-review/ec02c2f182b2072f0aa0ae027a73efcd6e53390876ec66eab131c44a     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ ಚೆಕ್: ನಟಿ ಸಾಯಿ ಪಲ್ಲವಿ, ನಿರ್ದೆಶಕ ರಾಜ್ಕುಮಾರ್ ಪೆರಿಯಾಸಾಮಿ ಅವರನ್ನು ವಿವಾಹವಾಗಿಲ್ಲ ವೈರಲ್ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಕತ್ತರಿಸಿ, ಸಾಯಿಪಲ್ಲವಿ ಮತ್ತು ರಾಜ್ಕುಮಾರ್ ಪರಿಯಾಸಾಮಿ ಪದವಿಯಾಗಿದ್ದಾರೆಂದು ಬಿಂಬಿಸಲು ಯತ್ನಿಸಲಾಗಿದೆ. Claim :ನಟಿ ಸಾಯಿಪಲ್ಲವಿ ಮತ್ತು ನಿರ್ದೇಶಕ ರಾಜ್ಕುಮಾರ್ ಪೆರಿಯಾಸಾಮಿ ವಿವಾಹವಾಗಿದ್ದಾರೆ. Fact :ಈ ಇಬ್ಬರ ಫೋಟೋ, ಎಸ್ಕೆ 21 ಚಿತ್ರದ ಮುಹೂರ್ತದ ಸಂದರ್ಭದಲ್ಲಿ ತೆಗೆದದ್ದು. ನಟಿ ಸಾಯಿ ಪಲ್ಲವಿ ಮತ್ತು ನಿರ್ದೇಶಕ ರಾಜ್ಕುಮಾರ್ ಪೆರಿಯಾಸಾಮಿ ಜೊತೆಗೆ ನಿಂತಿರುವ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಉಡುಪಿನಲ್ಲಿರುವ ಈ ಇಬ್ಬರೂ ಹಾರತೊಟ್ಟು ನಿಂತಿದ್ದಾರೆ. ಫೇಸ್ಬುಕ್ ಮತ್ತು ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಹಲವರು ನಟಿ ಮತ್ತು ನಿರ್ದೇಶಕ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂದು ಪ್ರತಿಪಾದಿಸಿವೆ. ಕೆಲವು ಪೋಸ್ಟ್ಗಳಲ್ಲಿ," ಕಡೆಗೂ ಮದುವೆಯಾದರು ಮತ್ತು ಪ್ರೀತಿಗೆ ಬಣ್ಣವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ತಲೆಬಾಗುವೆವು ನಿಮಗೆ ಸಾಯಿ ಪಲ್ಲವಿ" ಎಂದು ಬರೆಯಲಾಗಿದೆ. ಫ್ಯಾಕ್ಟ್ಚೆಕ್ ಈ ಚಿತ್ರವನ್ನು ಎಸ್ಕೆ 21 ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಸೆರೆಹಿಡಿಯಲಾಗಿದ್ದು, ವಿವಾಹದ ಸಂದರ್ಭದಲ್ಲಿ ಸೆರೆಹಿಡಿದಿದ್ದು ಎಂಬುದು ತಪ್ಪು ಪ್ರತಿಪಾದನೆ. ಶಿವಕಾರ್ತಿಕೇಯನ್ ನಾಯಕನಟರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಎಸ್ಕೆ 21 ಎಂದು ಹೆಸರಿಡಲಾಗಿದ್ದು, ಮುಹೂರ್ತದ ಸಂದರ್ಭದಲ್ಲಿ ನಟಿ ಸಾಯಿಪಲ್ಲವಿ, ನಿರ್ದೇಶಕ ರಾಜ್ಕುಮಾರ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಕ್ಲಾಪ್ಬೋರ್ಡ್ ಹಿಡಿದು ನಿಂತಿರುವುದು ಮೂಲ ಫೋಟೋದಲ್ಲಿ ಕಾಣಬಹುದು. ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಮೇ 9ರಂದು ರಾಜ್ಕುಮಾರ್ ಅವರು ಮುಹೂರ್ತದ ಸಂದರ್ಭದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿ ಸಾಯಿಪಲ್ಲವಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು. ಆ ಪೋಸ್ಟ್ನಲ್ಲಿ, " ಪ್ರೀತಿಯ ಸಾಯಿಪಲ್ಲವಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವೊಬ್ಬ ಅದ್ಭುತ ವ್ಯಕ್ತಿ ಮತ್ತು ಉತ್ತಮವಾದುದೆಲ್ಲವೂ ಸದಾ ನಿಮಗೆ ದೊರೆಯಲಿದೆ ಎಂದು ಆ ದೇವರು ಹರಸಲಿ. ನೀವು ನಮ್ಮ ಪಕ್ಕದಲ್ಲಿ ನಿಂತಿದ್ದು ನನ್ನ ಭಾಗ್ಯವೆಂದು ಭಾವಿಸುವೆ. ನನ್ನೊಂದಿಗೆ ಇದ್ದುದ್ದಕ್ಕೆ ಧನ್ಯವಾದಗಳು" ಈ ವೈರಲ್ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಕತ್ತರಿಸಿ, ಸಾಯಿಪಲ್ಲವಿ ಮತ್ತು ರಾಜ್ಕುಮಾರ್ ಪರಿಯಾಸಾಮಿ ಪದವಿಯಾಗಿದ್ದಾರೆಂದು ಬಿಂಬಿಸಲು ಯತ್ನಿಸಲಾಗಿದೆ. ಹಾಗಾಗಿ ಸಾಯಿ ಪಲ್ಲವಿ ಮತ್ತು ರಾಜ್ಕುಮಾರ್ ಮದುವೆಯಾಗಿದ್ದಾರೆ ಎಂಬುದು ಸುಳ್ಳು.
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.123 as of May 22 2025


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data]
OpenLink Virtuoso version 07.20.3241 as of May 22 2025, on Linux (x86_64-pc-linux-musl), Single-Server Edition (126 GB total memory, 8 GB memory in use)
Data on this page belongs to its respective rights holders.
Virtuoso Faceted Browser Copyright © 2009-2026 OpenLink Software