About: http://data.cimple.eu/claim-review/83bcb847654954eba5da5874daf9fb4d601e3de506441cc375c2f55f     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಶಾಲಾ ಮಕ್ಕಳು ನದಿ ದಾಟುತ್ತಿರುವ ವೀಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಶಾಲಾ ಮಕ್ಕಳು ನದಿ ದಾಟುತ್ತಿರುವ ವೀಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ Claim :ಭಾರತ ದೇಶದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶಾಲಾ ಮಕ್ಕಳು ನದಿ ದಾಟುತ್ತಿದ್ದಾರೆ Fact :ವೈರಲ್ ಆದ ವಿಡಿಯೋ ಭಾರತದಲ್ಲ, ನೇಪಾಳದ ಕುಂಪುರದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ನದಿ ದಾಟುತ್ತಿರುವ ವಿಡಿಯೋ ತುಣುಕು ಭಾರತದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ, ಅನಿರೀಕ್ಷಿತ ಪ್ರವಾಹಗಳು ಸಂಭವಿಸಿವೆ. ಅನೇಕ ಜನರು ತಮ್ಮ ಸ್ಥಳೀಯ ಗ್ರಾಮಗಳು ಮತ್ತು ಮನೆಗಳನ್ನು ಸ್ಥಳಾಂತರಿಸಬೇಕಾಯಿತು. ಸೋಶಿಯಲ್ ಮೀಡಿಯಾದಲ್ಲಿ ಪ್ರವಾಹದ ಚಿತ್ರಗಳು ಮತ್ತು ವೀಡಿಯೊಗಳು ತುಂಬಿವೆ. ಹಲವು ನಗರಗಳು ಕೂಡ ಭಾರೀ ಮಳೆಗೆ ತತ್ತರಿಸಿವೆ. ಶಾಲಾ ಸಮವಸ್ತ್ರಧಾರಿ ಮಕ್ಕಳು ತಮ್ಮ ಜೀವಕ್ಕಾಗಿ ಪುಲ್ಲಿ ಕೇಬಲ್ ಬಳಸಿ ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ. ಮಕ್ಕಳು ಕೇಬಲ್ ದಾಟುತ್ತಿರುವಾಗ ಕೆಳಗೆ ನದಿಯು ರಭಸವಾಗಿ ಹರಿಯುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ವೀಡಿಯೊವಿಗೆ ಹಿಂದಿಯಲ್ಲಿದೆ, “सरकार ने जितनी ताकत कावड़ यात्रा पर लगाई है काश कि थोड़ा सा ध्यान इन स्कूल जाते बच्चों के रास्ते के लिए भी दे देते।” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ‘‘ಸರ್ಕಾರ ಧಾರ್ಮಿಕ ಯಾತ್ರೆಗಳತ್ತ ಗಮನ ಹರಿಸುವುದನ್ನು ಬಿಟ್ಟು... ಈ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ರಸ್ತೆ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರಕಾರ ಪ್ರಯತ್ನ ಪಡಬೇಕು ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. सरकार ने जितनी ताकत कावड़ यात्रा पर लगाई है काश कि थोड़ा सा ध्यान इन स्कूल जाते बच्चों के रास्ते के लिए भी दे देते।, pic.twitter.com/O6imGZwgwj— Dhruv Rathee Satire (@DhruvRatheFc) July 28, 2024 सरकार ने जितनी ताकत कावड़ यात्रा पर लगाई है काश! कि थोड़ा सा ध्यान इन स्कूल जाते बच्चों के रास्ते के लिए भी दे देते। pic.twitter.com/ow3zWATums— Inderjeet Barak🌾 (@inderjeetbarak) July 26, 2024 सरकार ने जितनी ताकत कावड़ यात्रा पर लगाई है काश कि थोड़ा सा ध्यान इन स्कूल जाते बच्चों के रास्ते के लिए भी दे देते। pic.twitter.com/D1XHzR15gz— 🍁Ashok Bauddha🍁 (@AshokBuaddha) July 29, 2024 सरकार ने जितनी ताकत कावड़ यात्रा पर लगाई है काश कि थोड़ा सा ध्यान इन स्कूल जाते बच्चों के रास्ते के लिए भी दे देते।, pic.twitter.com/OsOhTseic4— Kamlesh Kushwaha (@Kamlesh04653850) July 29, 2024 सरकार ने जितनी ताकत कावड़ यात्रा पर लगाई है काश कि थोड़ा सा ध्यान इन स्कूल जाते बच्चों के रास्ते के लिए भी दे देते।, pic.twitter.com/CbQUuI4Mtz— pankaj mathur (@pankajm22214907) July 28, 2024 ಫ್ಯಾಕ್ಟ್ಚೆಕ್ ವೈರಲ್ ಆದ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ಆದ ವಿಡಿಯೋ ಭಾರತ ದೇಶಕ್ಕೆ ಸಂಬಂಧಿಸಿದ್ದಲ್ಲ, ಈ ವಿಡಿಯೋ ನೇಪಾಳದ್ದು. ನಾವು ವೀಡಿಯೊದಿಂದ ತೆಗೆದ ಕೆಲವು ಪ್ರಮುಖ ಕೀಫ್ರೇಮ್ಗಳ ಮೂಲಕ Google ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಈ ವಿಡಿಯೋ ನೇಪಾಳದ್ದು ಎಂದು ಸಾಭೀತು ಪಡಿಸುವ ಕೆಲವು ದೃಶ್ಯಗಳು ಯೂಟ್ಯೂಬ್ನಲ್ಲಿ ಕಂಡುಬಂದಿತು ಕೆಲವು ಇನ್ಸ್ಟಾಗ್ರಾಮ್ ಖಾತೆದಾರರು ತಮ್ಮ ಖಾತೆಯಲ್ಲಿ “The Daily struggle of Nepal Students” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಫ್ರೀ ಡಾಕ್ಯುಮೆಂಟರಿ ಎಂಬ ಫೇಸ್ಬುಕ್ ಪೇಜ್ನಲ್ಲಿ "most Dangerous ways of School I Nepal I Free Documentary" ಎಂಬ ಶೀರ್ಷಿಕೆಯೊಂದಿಗಿರುವ ವೀಡಿಯೊವೊಂದನ್ನು ನಾವು ಕಂಡುಕೊಂಡೆವು. ಇದು ನೇಪಾಳದ ಶಾಲಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟ ಎಂದು ವಿಡಿಯೋವಿನಲ್ಲಿ ಹೇಳಲಾಗಿದೆ. ವೀಡಿಯೋವಿಗೆ ನೀಡಿರುವ ಡಿಸ್ಕ್ರಿಪ್ಷನ್ನಲ್ಲಿ ಕುಂಪೂರದ ಪರ್ವತ ಗ್ರಾಮದಲ್ಲಿರುವ ಶಾಲಾ ಮಕ್ಕಳು ಶಾಲೆಗೆ ಹೋಗಲು ವಿದ್ಯಾರ್ಥಿಗಳು ಬೆಟ್ಟ ಗುಡ್ಡಗಳನ್ನು ದಾಟಿ ನಡೆದುಕೊಂಡು ಹೋಗಬೇಕು. ಮಕ್ಕಳ ಕುಟುಂಬದವರು ಪ್ರತಿ ನಿತ್ಯ ಭಯದಿಂದಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ತಮ್ಮ ಮಕ್ಕಳನ್ನು ಒಂದು ದಿನ ಬಿಟ್ಟು ಮತ್ತೊಂದು ದಿನ ಶಾಲೆಗೆ ಕಳುಹಿಸುತ್ತಾರೆ ಎಂದು ಬರೆಯಲಾಗಿದೆ. ನಾವು IMDb ಪೇಜ್ನಲ್ಲೂ ಈ ಸುದ್ದಿಗೆ ಸಂಬಂಧಿಸಿದ ವಿಡಯೋವೊಂದು ಕಂಡುಕೊಂಡೆವು.ಈ ವಿಡಿಯೋವಿಗೆ "The Most Dangerous Ways to School" ಎಂಬ ಸಾಕ್ಷ್ಯಚಿತ್ರ ಸರಣಿಯಲ್ಲಿರುವ ಒಂದು ಸಂಚಿಕೆಯಲ್ಲಿ ಈ ಸುದ್ದಿಯ ಕುರಿತು ನಾವು ನೋಡಬಹುದು. ಮೇ 2024ರಲ್ಲಿ ಕೇರಳದ ಶಾಲಾ ವಿದ್ಯಾರ್ಥಿಗಳ ದುಸ್ಥಿತಿಯಿದು ಎಂದು ವೈರಲ್ ಆದ ಸುದ್ದಿಯನ್ನು ಹಲವಾರು ಫ್ಯಾಕ್ಟ್ಚೆಕ್ ಸಂಸ್ಥೆಗಳು ವೈರಲ್ ಸುದ್ದಿ ನಿಜವಲ್ಲ ಎಂದು ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನಿರಾಕರಿಸಿದ್ದಾರೆ. https://factly.in/a-video-clip-from-a-documentary-about-school-kids-of-nepal-crossing-rivers-to-attend-school-is-falsely-linked-to-kerala-india/ ಹೀಗಾಗಿ ವೈರಲ್ ಆದ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂದು ಸಾಭೀತಾಗಿದೆ. ವೈರಲ್ ಆದ ವಿಡಿಯೋ ನೇಪಾಳದ ಶಾಲಾ ವಿದ್ಯಾರ್ಥಿಗಳು ಕೇಬಲ್ ಕಾರ್ ಸೇತುವೆಯನ್ನು ಬಳಸಿಕೊಂಡು ನದಿಯನ್ನು ದಾಟುತ್ತಿರುವ ದೃಶ್ಯ ಸಾಕ್ಷ್ಯಚಿತ್ರದಲ್ಲಿ ಒಂದು ಸಂಚಿಕೆಯ ಭಾಗವಾಗಿದೆ.
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software